Tuesday, June 22, 2010

ತಂಗಾಳಿ

ಆ ಬೆಟ್ಟ ಅಳೆದು
ಈ ಗುಡ್ಡ ಸುತ್ತಿ
ಹೊರ ಹೊಲದ ಮೈಯ ಮ್ಯಾಲೆ
ಸೂಸುತ್ತ ಕಂಪು
ಹರಡುತ್ತ ತಂಪು
ತಂಗಾಳಿ ತೀಡಿ ಬಂತು

ಮುಂಜಾನೆ ಎದ್ದ
ಲಲನೆಯರ ದಂಡು
ಬರುತಿರೆ ನೀರ ಹೊತ್ತು
ನಡುವನ್ನು ನಡುಗಿಸುತ
ಬೈತಲೆಯ ಕದಡುತ
ತಂಗಾಳಿ ತೀಡಿ ಬಂತು

ಊರಾಚೆ ಹನುಮ
ಊರೊಳಗೆ ಬೀರಪ್ಪನ
ಗುಡಿಯೋಳಗಿರೆ ಗಂಟೆ ಸದ್ದು
ಇಬ್ಬನಿಯ chumukisuta
ಅಂಗನವ ಹಸನಿಸುತ
ತಂಗಾಳಿ ತೀಡಿ ಬಂತು

No comments:

Post a Comment