ನೆನಪಿರಲಿ ನಾ ಯಾವಾಗಲು
ಗೆಳತಿ ತುಂಬಿರುವೆ ನನ್ನ ಮನದಲ್ಲಿ ಈಗಲೂ
ಅರಸಿದೆ ನಿನ್ನ ನಾ ಹಗಲು ಇರುಳು
ತಾಳದು ಈ ನನ್ನ ಮನ ನೀ ದೂರಾಗಲು
ಮನದಲ್ಲಿ ತುಂಬಿದೆ ನಿನ್ನದೇ ರೂಪು
ಬೇಡ ಎಂದರೂ ಹೋಗುತ್ತಿಲ್ಲ ಆ ನಿನ್ನ ನೆನಪು
ಭೋರ್ಗರೆವ ಮಳೆಗೆ ಸಿಲುಕಿತ್ತು ನನ್ನ ಬಾಳು
ಪ್ರೀತಿಯ ಕೊಡೆಯ ಅರಳಿಸಿ ನೆರವಾಗಿತ್ತು ನಿನ್ನ ತೋಳು
ನಿನ್ನ ಕಂಡ ಮೊದಲ ದಿನ
ನೀಡಿದ್ದೆ ನಾ ಒಂದು ವಚನ
ಕಾಲದ ಹೊಡೆತಕ್ಕೆ ಅದು ಚೂರಯ್ತು
ನಾವಿಬ್ಬರೂ ಬೇರೆ ಬೇರೆಯಾಗಿ ಬಾಳಬೇಕಾಯ್ತು
ಮತ್ತೆ ಮಳೆಯಲ್ಲಿ ಸಿಲುಕಿದೆ
ಅಲೆದಾದುತ್ತಿರುವೆ ದಾರಿ ಕಾಣದೆ
ಪ್ರತಿ ಹೆಜ್ಜೆಯೂ ನೆನಪಿಸುತ್ತಿದೆ ನಿನ್ನ ನೋಟ, ಮಾತು, ಪ್ರೀತಿಯ ಆಸರೆ
ಹೃದಯ ದೇವತೆಯೇ ಬಂದು ಮಾತನಾಡಿಸಬರದೆ ಮನಸಾರೆ
ಗೆಳತಿ ತುಂಬಿರುವೆ ನನ್ನ ಮನದಲ್ಲಿ ಈಗಲೂ
ನೆನಪಿರಲಿ ನಾ ಯಾವಾಗಲು
No comments:
Post a Comment